Friday, May 11, 2018

ವಚನಗಳ ಉಳಿಸೋಣ..


ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಅಳಗುಂಡಿ ಅಂದಾನಯ್ಯ' ಅವರ ಕವನ.. 

ವೇಷ ಭೂಷಣ 
ಮಾತು ಭಾಷಣ
ಆದರೇನು ಬಂತು!?

ತೊಟ್ಟ ಬಟ್ಟೆಗೆ
ಕೊಟ್ಟ ಮಾತಿಗೆ
ಅರಿವು ಇತ್ತೇನು!?

ಗಂಭೀರ ವದನ
ಹಣ್ಣಾದ ಮದನ
ಒಳಗೇನೋ ಕದನ!?

ಬದುಕಿಗೆ ಬಂದಾಗಿದೆ
ಬಾಳಿದ್ದೂ ಸಾಕಾಗಿದೆ
ಉಳಿದದ್ದು ಶೂನ್ಯವೇ!?

ಒಳಗಿಳಿದ ವಚನಗಳು
ಬೆಳಗಿದವು ಮೈಮನಗಳು 
ಉಳಿದಾವೇ ಉಳವಿತನಕ!?

ಹಚ್ಚಿಟ್ಟ ಹಣತೆಯಂತೆ
ಬಿಚ್ಚಿಟ್ಟ ಬದುಕಿನಸಂತೆ
ಬಯಲು ಲಿಂಗ ಜಂಗಮವೇ!?

- ಅಳಗುಂಡಿ ಅಂದಾನಯ್ಯ..

Like this post? Like & Follow us on Facebook so you never miss out.


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...