ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಹರ್ಷವರ್ಧನ ವನಕುದುರೆ' ಅವರ ಕವನ..
ಬಾ ಗೆಳೆಯ ಧಾರವಾಡಕ ಈ ಐತಾರಕ
ಶ್ಯಾಣ್ಯಾ ಮಂದಿ ಇರು ಜಾಗಾನ ನೀ ತಿಳಕೊಳಾಕ
ಹೊಸಾ ಬಸ್ ಸ್ಟಾಂಡನ್ಯಾಗ ಬಂದ ಇಳಿ ನಾ ಬರತೆನ ಕರಿಯಾಕ
ಆಶೀ ಇಟ್ಟಕ್ಕೊಂಡ ಬಾ ನೀ ಧಾರವಾಡ ಸುತ್ತಾಕ
ನಮ್ಮ ಕಡಿ ಮಳಿ ಭಾಳಂತ ನೀ ಅಂಜಬ್ಯಾಡ ಬರಾಕ
ಇಬ್ಬನಿ ನೋಡಿ ಮಬ್ಬ ನೀ ಆಗಬ್ಯಾಡ ಒಮ್ಮೆದಕ
ಚಂದಾನ ಮಂದಿ ಜೋಡಿ ಚಂದಾದ ಮಾತಾಡಕ
ಹಾದೆಲ್ಲ ಹಸಿಯಾಗೆತಿ ಮಳಿ ಆಗುವುದಕ ಮತ್ತ್ ನೀ ಬರುವುದಕ
ಧಾರವಾಡ ಪೇಡಾ ಸಿಹಿ ಸವೆಕೆಂತ ಬಂದಬಳಿಕ
ಜ್ವಾಳದ ರೊಟ್ಟಿ ಏಣಗಾಯಿ ಪಲ್ಯ ಕಾಯಾತಾವ ಬಾಯಾಗ ನೀರುರಸಾಕ
ಗಿರ್ಮೀಟ್ ಮಿರ್ಚಿಭಜಿ ಬರತಾವ ದಿನಾ ಸಂಜಿ ಆಗುವುದಕ
ಚಹಾ ಕುಡದ ಹರಟಿ ಹೊಡಿನು ಸಾಕಾಗುತನಕ
ಸಾಧನಕೇರಿ ,ಕೆಸೀ ಪಾರ್ಕ್, ಕೆಲಗೆರಿ ಸುತ್ತಿ ಬರುವುದಕ
ಉಳವಿ ಬಸವೇಸ್ವರ ,ನುಗ್ಗಿಕೇರಿ ಹನಮಪ್ಪಗ ನಮಸ್ಕಾರ ಮಾಡುವುದಕ
ಬಾ ನೀ ಕೆಸಿಡಿ ,ಕೆಯುಡಿ ,ಅಗ್ರಿ ಕಾಲೇಜ್ ಹುಡುಗೇರನ ನೋಡಾಕ
ಬಾ ಲಗು ನೀ ಧಾರವಾಡಕ ಇವೆಲ್ಲ ಮಾಡಾಕ
ಸಂಗೀತ ನಾಟಕ ಸಿನಿಮಾಗೊಳಿಗಿ ಬರ ಇಲ್ಲ ದಿನಾ ನೋಡಾಕ
ಪ್ರೀತಿ ಮಾಡು ಮಂದಿ ಐತಿ ನಿನ್ನ ಅರ್ಥಮಾಡಕೊಳಾಕ
ಮಲೆನಾಡ ಸೆರಗ ಸುತ್ತಾಕೆತಿ ನೀನಗ ಹಸಿರ ತೋರಿಸಾಕ
ಬಾ ನೀ ಕವಿ ಸಾಹಿತಿಗಳ ಊರಾಗ ನೀನು ಕವಿಆಗುವುದಕ
No comments:
Post a Comment