ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಹರ್ಷವರ್ಧನ ವನಕುದುರೆ' ಅವರ ಕವನ..
ಯಾವ ಜನುಮದ ಪಾಪದ ಪರಿಯೇ...
ಕಾಡುತಿರುತವೆ ಕಂಗಳು ನಿದಿರೆ ಸೋಕುವವರೆಗೆ...
ನಿತ್ಯವೆಂದರೆ ಸಾಕಾಗದು ಅದುವೆ ಸತ್ಯ ಕಟು ಸತ್ಯ...
ಸಮಯ ಸಾಲದಂತಿರುವಂತಿರುತದೆ...
ಆದರೆನೋ ಮನ ಬಯಸುತಿರುವಂತಿರುತದೆ...
ಬಯಕೆಯ ಬಾಗಿಲಿಂದ ಬಯಲಕಾಣುವಂತಿದೆ...
ಸಾಗದು ದೂರ ಸಮೀಪಿಸುವುದೆ ತೀರಾ?...
ಗತಿಸಿದವುಗಳೆಷ್ಟೋ ವಸಂತಗಳು ಹೊಸ ಚೈತ್ರದ ಚಿಗುರೆಲೆಗಳೊಂದಿಗೆ...
ಹೂಗಳರಳುತಿಹವು ಸಮಯ ಜಾರುವ ಮುನ್ನ...
ಯಾರ ಮುಡಿಗೆ ಸೇರುವುದೋ ಸುಗಂಧ ಮಾಸುವ ಮುನ್ನ...
ಕೇಳುತಿಹವು ಸಾವಿರ ಒಲವ ಕಂಗಳು...
ಶುಭ ಸೂಚನೆ ನೀಡು ನೀ ಮಳೆಗೆ ಕೊಡೆ ಹಿಡಿಯುವ ಮುನ್ನ...
ಏನೆಂದು ಹೇಳಲಿ ನಾ ಈ ಸಮಯಕೆ?...
ಮುಗುಳುನಗೆಯೊಂದೆ ಸಾಕು ಎಲ್ಲ ಪ್ರಶ್ನೆಗಳ ಮುಂದೆ...
ಅದುವೆ ಸರಿಉತ್ತರವೆಂದೆನಿಸುತಿದೆ ಜಂಟಿ ಯಾಗುವ ಮುನ್ನ...
ಮುಂಗಾರಿನ ಅಭಿಷೇಕಕೆ ಶಿರಬಾಗಲೇನು?...
ಹೊಸವಸಂತಕೆ ಸ್ವಾಗತ ಹೇಳಲೇನು?...
ಸಾವಿರ ಕಂಗಳ ಪರ ಕೇಳುತಿವೆ
ಈ ಬ್ರಹ್ಮಚರ್ಯ ಜೀವನಕ್ಕೆ ಏನೆಂದು ಹೇಳಲಿಂದು?...
No comments:
Post a Comment