Friday, May 25, 2018

ಮತ್ತೆ ಮನ ಸೋತಿತು ಧಾರವಾಡದ ಮಳೆಗೆ..


ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ ''ಹರ್ಷವರ್ಧನ ವನಕುದುರೆ' ಅವರ ಕವನ.. 

ಸೋತಿತು ನನ್ನೀ ಮನವು ಧಾರವಾಡದ ಧಾರಾಕಾರ ಮಳೆಗೆ
ಮಲೆನಾಡ ಸೆರಗಿನ ಈ ಸುಂದರ ಇಳೆಗೆ
ಸಾಧನಕೇರಿಯ ಬೀದಿಯ ಸಾಲುಮರದ ಕೆಳಗೆ
ಆ ಎಲೆಗಳ ಮೇಲಿಂದ ಜಾರುವ ತುಂತುರು ಹನಿಗಳ ಒಳಗೆ
ಮುತ್ತಿನ ಹನಿಗಳು ಮತ್ತೇರಿಸುತಿವೆ ಒಳಗೊಳಗೆ
ಕಣ್ಣಿನ ರೆಪ್ಪೆಗಳು ತಡವರಿಸುತಿವೆ ಆ ಮಂಜಿನ ತಂಗಾಳಿಗೆ
ಆ ಹನಿಗಳ ಭಾರಕೆ ಉದುರುತಿವೆ ಪಾರಿಜಾತ ಕೆಳಗೆ
ಸಂಪಗೆ ಮರದಲಿನ ಗುಬ್ಬಚ್ಚಿಗಳ ಪಿಸುಮಾತು ಒಳಗೊಳಗೆ
ಪೇಢಾನಗರಿಯ ಮೈಸೊಬಗು ಎಲ್ಲೆ ಮೀರುವಂತಿದೆ ಈ ಕಳೆಗೆ
ಮತ್ತೆ ಮನ ಸೋತಿತು ಧಾರವಾಡದ ಇಳೆಗೆ ಮಳೆಗೆ

- ಹರ್ಷವರ್ಧನ ವನಕುದುರೆ.. 

Like this post? Like & Follow us on Facebook so you never miss out.


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...