ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಸಂತೋಷ್. ಎಚ್' ಅವರ ಕವನ..
ನಿನ್ನ ಈ ಮಿತಿಮೀರಿದ ನೆನಪಿಗೆ
ಕಾರಣ ಈ ಕೊರೆವ ಚಳಿಯೇ
ನಿನ್ನ ನೆನಪಿನ ಗರ್ಕದಲಿದ್ದ
ನನಗೆ ಮನಸು ನಿನ್ನ ಸಂಗ ಬಯಸುತಿದೆ
ಈ ರಾತ್ರಿ ಇಂಚಿಂಚಾಗಿ ಕೊಲ್ಲಲು
ಜನ್ಮ ಹರಸಾಹಸ ಪಡುತಿದೆ
ದಯಮಾಡಿ ಕೊಡು ಚೂರು
ಸದರ ಅರಿ ನನ್ನ ಮನದಿಂಗಿತ
ತವಕ ತಿಳಿಯಾಗಿರುವಾಗಲೇ
ಬಂದು ಸೇರಿ ಬಿಡು ಗೆಳತಿ
ಸಂಧ್ಯಾ ಕಳೆದು ಶಶಿ ಬರುವಂತೆ
ಮುಂಜಾವು ಮೂಡಿದಾಗ ಭಾಸ್ಕರ ಬರುವಂತೆ
ಹರೆಯ ಅದುರಿ ಉದುರಿ ಹೆದರಿ
ಹೋಗಲಿ ಬಾಯ್ ದಡಗಳು
ಸಪ್ಪಳಿಸುತಿಹವು ನಿನ ಸ್ಪರ್ಶಕೆ
ನಯನಗಳು ನಾಚಿ ಮುಚ್ಚಿಕೊಳುತಿವೆ
ಹೆಚ್ಚು ಕಾಯಿಸಬೇಡ
ಒಂದು ನಿಮಿಷ ಒಂದು ಜನ್ಮವಾಗುವಂತೆ
ಹುಚ್ಚು ಹಿಡಿಯುವ ಮುನ್ನ
ನನ್ನ ಮನದ ಅಳಲನರಿ
ಎರಡು ಜೀವಗಳ ಸಮ್ಮಿಲನದಲಿ
ತೋಳ್ಬಂದಿಗಳ ಜೊತೆಯಲ್ಲಿ
ಜೋಡಿ ಅಧರಗಳ ಸಿಹಿಜೇನ ಸವಿಯೋಣ
ನಿಟ್ಟುಸಿರಿನ ನಿಟ್ಟಿನಲ್ಲಿ
ಇದು ತುಚ್ಛ ಮನವಲ್ಲ
ಸ್ವಚ್ಛ ಮನವೆಂದರಿತು
ಇಚ್ಚೆಯಿಂದ ಬಾ ಸ್ವಚ್ಛಂದದ
ಸ್ವರ್ಗದಲಿ ಬೆಚ್ಚಗೆ ಇರೋಣ
No comments:
Post a Comment