Friday, May 11, 2018

ಗೀಜಗನ ಗೂಡು..


ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಸೌಮ್ಯ ಮಂಡ್ಯ' ಅವರ ಕವನ.. 

ಜನನದ ಜತೆಗೆ ಮೊದಲ ಹೆಜ್ಜೆ 
ಮರಣದ ಜತೆಗೆ ಕೊನೆಯ ಹೆಜ್ಜೆ
ಹಳಿಗಳಂತೆ ಸಾಗೋ ಜೀವನ ಪಾಡು 
ಅಳಿದು ಹೋಗುವ ಈ ಬದುಕು ಗೀಜಗನ ಗೂಡು..

ಯಾರೇ ಬರಲಿ ಭೂಮಿಗೆ 
ಸ್ಥಿರವಲ್ಲ ಈ ಸಂತೆ 
ಯಾರೇ ಹೋಗಲಿ ನಾಳೆಗೆ 
ಬಿಟ್ಹೋಗುವರು ನೆನಪ 
ಕಂತೆ ಕಂತೆ

ಕೊಳೆತು ನಾರುವ ಯಾತನೆಗಳೆಷ್ಟೋ ಮನದೊಳಗೆ
ಆಗಾಗ ಬಂದ್ಹೋಗುವ ನಗುವೊಂದು ಮುಖವಾಡ ಮೊಗದೊಳಗೆ

ಹಾಕಿಕೊಂಡಿರುವುದು ನೀತಿ ನೇಮಗಳ ಜಪಮಾಲೆ 
ತುಂಬಿಕೊಂಡು ನಮ್ಮೊಳಗೆ ಸ್ವಾರ್ಥ ಸುಳ್ಳುಗಳ ಸುರಿಮಳೆ

ಸಂಬಂಧಗಳ ಜೊತೆಗೆ ಸಾಗೋ 
ಈ ಜೀವನ ಪಾಡು 
ಕಷ್ಟ ಸುಖಗಳ ಅಲೆಗೆ ತತ್ತರಿಸೋ ಈ ಬದುಕು ಗೀಜಗನ ಗೂಡು....


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...