ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಪ್ರಮೀಳಾಮಂಜು ಉರಾಳ' ಅವರ ಕವನ..
ಬಂತೆಂದರೆ ಸೊರ ಸೊರ ನೆಗಡಿ
ನೆನಪಾಗುವುದು ಔಷಧಿ ಅಂಗಡಿ
ಅಡುಗೆ ಕೊಣೆಯಲಿ ಮೆಣಸು
ಜೀರಿಗೆ ಶುಂಠಿ ಅರಿಶಿನಕೆ ಗಡಿಬಿಡಿ
ಹುರಿದ ಜೀರಿಗೆ ಮೆಣಸುಗಳು
ಕುಠಾಣಿ ಕುಣಿತಕ್ಕೆ ಪುಡಿಪುಡಿ
ಕಾದ ಎಣ್ಣೆಗೆ ಬಿದ್ದ ಸಾಸಿವೆ ಕರಿಬೇವು
ಚಿಟ ಪಟ ಗೊಣಗುತ್ತಾ ಸಿಡಿಮಿಡಿ
ಹುಣಸೆ ಬೆಲ್ಲವು ಮೆಲ್ಲನೆ ಕರಗುತ
ಕೊತಕೊತ ಕುದಿಯಿತು ಜೊತೆಗೂಡಿ
ಕರಗಿದ ಸಮ್ಮಿಶ್ರಕೆ ಹದವನರಿತು
ಉಪ್ಪದು ಬೆರೆತು ಮಾಡಿತು ಮೋಡಿ
ಘಮ್ಮೆನ್ನುವ ತುಪ್ಪವು ಕೂಡಿ
ಕುಡಿಯಲು ತಯಾರಿ ಮೆಣಸಿನ ಕಡಿ
ಇದನು ಸವಿದ ನಾಲಿಗೆ ಚಪ್ಪರಿಸಿ
ನಲಿನಲಿದೇಳಿತು ಧನ್ಯವಾದ ನೆಗಡಿ.
No comments:
Post a Comment