ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಹರ್ಷವರ್ಧನ ವನಕುದುರೆ' ಯವರ ಕವನ..
ಇಲ್ಲೊಂದು ಮರವಿದೆ,
ಹೂವಾಗುವ ಮುನ್ನವೆ ಮೊಗ್ಗುಗಳು ಉದುರುತಿವೆ.
ಹೂವಾಗುವ ಮುನ್ನವೆ ಮಸಣವ ಸೇರುತಿವೆ.
ಏನೀ ನೇಸರನ ಮಾಯೆ?
ಯಾರೀ ಶಾಪದ ಛಾಯೆ?
ಉದುರಿಬೀಳುವ ಸಾವಿರಾರು ಮೊಗ್ಗುಗಳಿಗೆ ಕಣ್ಣೀರಿಡುವವರಾರು? ಮಣ್ಣು ಹೊದಿಸುವವರಾರು??
ಹೂವಾಗುವ ಮುನ್ನವೆ
ಏನೀ ಭಾವ...ಏನೀ ಭಾವ...
ತಾಯಿಮರದಲಿ ಕಣ್ಣೀರಿನ ಕುರುಹುಗಳಷ್ಟಿವೆ
ಸಾವು ನೋವು ಮೊಗ್ಗುಗಳ ಮಧ್ಯೆ ಜನಿಸುತಿವೆ ಹೊಸಚಿಗುರೆಲೆಗಳ ಸಂತತಿ
ಯಾಕೀ ಜೀವ... ಯಾಕೀ ಜೀವ...
No comments:
Post a Comment