Friday, May 11, 2018

ಕನವರಿಕೆ..


ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಪ್ರಮೀಳಾಮಂಜು ಉರಾಳ' ಅವರ ಕವನ..

ನಿನ್ನೊಂದಿಗಿನ ಪ್ರೀತಿಯ ಮಿಡಿತವು
ಪ್ರತಿ ಘಳಿಗೆಗೂ ಅರಿವಾಗಿದೆ ನೋಡು
ಓಡುವ ಗಡಿಯಾರವು ಕ್ಷಣಗಳ ಜೊತೆಗೆ 
ನಿನ್ನದೇ ಹೆಸರನು ಉಸುರಿದೆ ನನಗೆ !!

ನಿದಿರೆಯಲೂ ಹೃದಯವು 
ಪಿಸುಗುಡುತಿದೆ ಸದ್ದಾಗದಂತೆ
ಕನಸುಗಳ ಹಾವಳಿಯಲ್ಲೂ
ನಿನ್ನ ರೂಪವೇ ತಾರೆಗಳು ಧಾಳಿ ಇಟ್ಟಂತೆ !!

ಉಸಿರಿನ ಪ್ರತಿ ಗಾಳಿಯಲು
ಪಸರಿಸಿದೆ ನಿನ್ನದೇ ಘಮಲು 
ಹಗಲಿನ ಕನಸಿನ ಗುಂಗಲ್ಲೂ
ನಿನ್ನದೇ ಕನವರಿಕೆಯ ಅಮಲು !!

ಮೂಡಿದ ಚಂದಿರನೇಕೋ
ತುಸು ನಾಚಿದಂತೆ ಹುಡುಕಾಡಿದೆ
ಮೋಡದಲಿ ಮರೆಯಾಗಲು
ಕದ್ದು ಮುಚ್ಚಿ ನಿನ್ನ ಸೌಂದರ್ಯ ಸವಿಯಲು !!

ಕಲಕಲನೆ ಹರಿಯುವ ನದಿಯೇಕೋ
ಕ್ಷಣಕಾಲ ನಿಂತೊಮ್ಮೆ ಥಟ್ಟನೆ
ಕಾಲ್ಗೆಜ್ಜೆಯ ನಾದಕೆ ಎಚ್ಚೆತ್ತು 
ಹರಿಯತ್ತಾ ಸಾಗಿದೆ ಜುಳು ಜುಳನೆ !!

ಹೇಗೆ ಕಾವಲಿರಲಿ ನಿನ್ನ ರೂಪಕೆ 
ಹುಚ್ಚಾಗಿದೆ ಮನ ನಿನ್ನ ಲಾವಣ್ಯಕೆ 
ಬಣ್ಣಿಸಲಿ ಹೇಗೆ ದೃಷ್ಟಿಯಾಗದಂತೆ 
ಈ ಸೌಂದರ್ಯಕೆ !!

ಒಡೆಯದಿರಲಿ ಕನಸಿನ 
ಈ ಚೆಲುವ ಶಿಲಾಬಾಲಿಕೆ !!

- ಪ್ರಮೀಳಾಮಂಜು ಉರಾಳ.. 

Like this post? Like & Follow us on Facebook so you never miss out.


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...