ನಮ್ಮ "ಅತಿಥಿ ಬರಹಗಾರರ ಅಂಕಣ" ದಲ್ಲಿ 'ಕಿರಣ ಕೆ.ವಿ' ಅವರ ಕವನ..
ಹೇ ಅಸುರನೆ
ನಿನಗೇನು ಆಗಿದೆ
ತಿಂದ ಹಸುಳೆಯ ಶಾಪ
ನಿನಗೆ ತಟ್ಟದೆ
ಕೊಂದೆಯಲ್ಲ ನೀನು
ಕಣ್ಬಿಡದ ಕಂದನನು
ಹೊಸಕಲಾಗಿದೆ ಅರಳಬೇಕಿದ್ದ
ಹೂವೊಂದನು
ಗುಡಿ ಚರ್ಚು ಮಸೀದಿ
ಎಲ್ಲೂ ಬಿಡುವುದಿಲ್ಲವೇ ನೀನು
ನಿನ್ನ ಪಾಪ ಕಾರ್ಯಕೆ ದೇವನೇ ಸಾಕ್ಷಿಯೇನು?
ಇಲ್ಲವೇ ಅವನೂ ಭಾಗಿಯೇನು?
ಹೇಳಿಬಿಡು ನಿನಗೇನು ದೊರಕಿತೆಂದು?
ಹುಡುಕುವೆವು ದಾರಿಯ ಅದು ಮತ್ತೊಂದು
ಮೃಗಕೆ ದೊರಕದಂತೆ
ಏನೂ ದೊರತಿಲ್ಲವಾದರೆ
ಕಣ್ಣಿಟ್ಟು ನೋಡು ನಿನ್ನಾತ್ಮವನೆ
ಹಾಕಿಕೋ ಉರುಳು
ಒಂದು ಪಾಠದಂತೆ
No comments:
Post a Comment