ದುಡಿಮೆಗಳು.. Commitment ಗಳು..
Smile ಕೊಡುವುದನ್ನೇ ಮರೆತ ತುಟಿಗಳು..
ಮನುಷ್ಯನನ್ನು ಅಳೆಯುವ ಸಾಧನವಾಗಿರುವ XYZ Salary ಗಳು..
ಭಾವನೆಗಳಿಲ್ಲದೆ ಉಭಯಕುಶಲೋಪರಿ ವಿಚಾರಿಸುವ What's App Message ಗಳು..
ಖುದ್ದಾಗಿ ಭಾವನೆ ಹಂಚಿಕೊಳ್ಳುವುದನ್ನೇ ಮರೆಸಿರುವ Like /Share /Comment button ಗಳು..
ಹಬ್ಬ-ಹರಿದಿನಗಳೆಂದರೆ 'ಸರ್ಕಾರಿ ರಜೆ' ಅಷ್ಟೇ ಎಂಬಂತಿರುವ Celebration ಗಳು..
ಬರೀ ಒಂದು ದಿನಕ್ಕಷ್ಟೇ ಸೀಮಿತವಾಗಿವೆ Mothers Day /Fathers Day /Friendship Day ಗಳು..
Hectic Weekdays ಗಳು,
Weekend ಗಾಗಿ ಕಾಯುವ ಮನಸುಗಳು..
Busy Lifestyle ನ ನಡುವೆ ಕಳೆದುಹೋಗುತ್ತಿರುವ ನಾವುಗಳು ಮತ್ತು ನೀವುಗಳು..
ಈ ತೊಳಲಾಟದಲ್ಲಿ ಅನಾಥವಾಗುತ್ತಿವೆ.. ನಮ್ಮೆಲ್ಲರ ಸಂಬಂಧಗಳು, ಮಾನವೀಯ ಮೌಲ್ಯಗಳು!!
No comments:
Post a Comment