Thursday, February 8, 2018

ಆಕಾಶದಿಂದ ಧರೆಗಿಳಿದ ರಂಭೆ..


ಚಿತ್ರ: ಚಂದನದ ಗೊಂಬೆ (1979) 

(ನಿರ್ದೇಶನ: ದೊರೈರಾಜ್ ಮತ್ತು ಭಗವಾನ್)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ     
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ

ಆಕಾಶದಿಂದ ಧರೆಗಿಳಿದ ರಂಭೆ,
ಆಕಾಶದಿಂದ ಧರೆಗಿಳಿದ ರಂಭೆ, 
ಇವಳೇ ಇವಳೇ ಚಂದನದ ಗೂಂಬೆ, ಇವಳೇ ಇವಳೇ ಚಂದನದ ಗೂಂಬೆ, 
ಚೆಲುವಾದ ಗೂಂಬೆ, ಚಂದನದ ಗೂಂಬೆ..

ಬಂಗಾರದಿಂದ  ಬೊಂಬೆಯನು ಮಾಡಿದ,
ಚಂದಿರನ ಕಾಂತಿಯ ತನುವಲ್ಲಿ ತುಂಬಿದ,
ತಾವರೆಯ ಅಂದ ಕಣ್ಣಲ್ಲಿ ತಂದ,
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ,
ಆ ದೇವರೇ ಕಾಣಿಕೆ ನೀಡಿದ, ನನ್ನಾ ಜೊತೆ ಮಾಡಿದ... ಆಹಾ.. 

ಆಕಾಶದಿಂದ ಧರೆಗಿಳಿದ ರಂಭೆ,
ಆಕಾಶದಿಂದ ಧರೆಗಿಳಿದ ರಂಭೆ, 
ಇವಳೇ ಇವಳೇ ಚಂದನದ ಗೂಂಬೆ, ಇವಳೇ ಇವಳೇ ಚಂದನದ ಗೂಂಬೆ, 
ಚೆಲುವಾದ ಗೂಂಬೆ, ಚಂದನದ ಗೂಂಬೆ..

ನಡೆವಾಗ ನಿನ್ನ ಮೈಮಾಟವೇನು,
ಆ ಹೆಜ್ಜೆ ನಾದಕೆ ಮೈಮರೆತು ಹೋದೆನು,
ಕಣ್ಣಲ್ಲೆ ನೂರು ಹೊಂಗನಸು ಕಂಡೆನು,
ಆ ಕನಸಿನಲ್ಲಿ ನಾ ಕರಗಿ ಹೋದೆನು,
ಆ ಹೂನಗೆ ಕಂಡೆನು.. ಸೋತೆನು, ನಿನ್ನಾ ಸೆರೆಯಾದೆನು... ಆಹಾ.. 

ಆಕಾಶದಿಂದ ಧರೆಗಿಳಿದ ರಂಭೆ,
ಆಕಾಶದಿಂದ ಧರೆಗಿಳಿದ ರಂಭೆ, 
ಇವಳೇ ಇವಳೇ ಚಂದನದ ಗೂಂಬೆ, ಇವಳೇ ಇವಳೇ ಚಂದನದ ಗೂಂಬೆ, 
ಚೆಲುವಾದ ಗೂಂಬೆ, ಚಂದನದ ಗೂಂಬೆ.. 



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...