ಚಿತ್ರ: ದೇವರ ಗುಡಿ (1975)
(ನಿರ್ದೇಶನ: ಆರ್. ರಾಮಮೂರ್ತಿ)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ,
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ,
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ,
ಸುಖ ಸಂಸಾರಕೆ ಎಂದೂ.. ಸತಿಯೇ ಕಾರಣ..
ಬಾನಿಗೆ ಎಂದೆದಿಗೂ ಆ ರವಿಯೇ ಭೂಷಣ,
ಬಳಕುವಾ ಲತೆಗೆ ಹೆಣ್ಣೀನಾ ಮುಡಿಗೆ, ಹೂವೆ ಭೂಷಣ,
ರಜನಿಗೆ ಎಂದೆದಿಗೂ ಆ ಶಶಿಯೇ ಭೂಷಣ,
ಅರಳಿದಾ ಮನಕೆ, ಹವಳದ ತುಟಿಗೆ ನಗುವೇ ಭೂಷಣ..
ನೋವಿಗೆ....... ನಲಿವಿಗೆ.......
ನೋವಿಗೆ....... ನಲಿವಿಗೆ....... ಹೆಣ್ಣೇ ಕಾರಣ ;
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ,
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ,
ಸುಖ ಸಂಸಾರಕೆ ಎಂದೂ.. ಸತಿಯೇ ಕಾರಣ..
ಮದುವೆಯ ಅನುಬಂಧವು ಎಂದೂ ಅಳಿಯದು,
ಕೋಪದಾ ಕಿಡಿಗೆ, ರೋಷದಾ ಉರಿಗೆ ಒಲವು ಬಾಡದು,
ದೇಹವು ದೂರಾದರೂ, ಮನಸು ಮರೆಯದು,
ಬೇರೆತಿಹ ಜೀವ, ವಿರಹದಾ ನೋವ ಎಂದೂ ಸಹಿಸದು..
ಒಲವಿನಾ........ ಜೀವನ.....
ಒಲವಿನಾ........ ಜೀವನ..... ಸುಖಕೇ ಸಾಧನ ;
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ,
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ,
ಸುಖ ಸಂಸಾರಕೆ ಎಂದೂ.. ಸತಿಯೇ ಕಾರಣ.
No comments:
Post a Comment