Thursday, February 8, 2018

ಬಾರೆ.. ಬಾರೆ...


ಚಿತ್ರ: ನಾಗರಹಾವು (1973) 
"ತಳುಕು ರಾಮಸ್ವಾಮಿ ಸುಬ್ಬರಾವ್ (ತ ರಾ ಸು)" ರ 
ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪ ಮತ್ಸರ.. 
ಎಂಬ ಮೂರು ಕಾದಂಬರಿಗಳ ಆಧಾರಿತ
(ನಿರ್ದೇಶನ: ಪುಟ್ಟಣ್ಣ ಕಣಗಾಲ್)
ಸಾಹಿತ್ಯ: ವಿಜಯನಾರಸಿಂಹ  
ಸಂಗೀತ: ವಿಜಯ ಭಾಸ್ಕರ್   
ಗಾಯನ: ಪಿ. ಬಿ. ಶ್ರೀನಿವಾಸ್ 

ಬಾರೆ.. ಬಾರೆ... ಚೆಂದದ ಚೆಲುವಿನ ತಾರೆ, 
ಬಾರೆ.. ಬಾರೆ... ಒಲವಿನ ಚಿಲುಮೆಯ ಧಾರೆ..

ಬಾರೆ.. ಬಾರೆ... ಚೆಂದದ ಚೆಲುವಿನ ತಾರೆ, 
ಬಾರೆ.. ಬಾರೆ... ಒಲವಿನ ಚಿಲುಮೆಯ ಧಾರೆ.. 

ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ,
ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ..

ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ,
ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ..

ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ,
ಮೌನ ಗೌರಿಯ ಮೋಹದ ಕೈ ಬಿಡಲಾರೆ..
ಬಾ..ರೆ.. ಬಾ..ರೆ... ಚೆಂದದ ಚೆಲುವಿನ ತಾರೆ, ಒಲವಿನ ಚಿಲುಮೆಯ ಧಾರೆ.. 

ಬಾರೆ.. ಬಾರೆ... ಚೆಂದದ ಚೆಲುವಿನ ತಾರೆ, 
ಬಾರೆ.. ಬಾರೆ... ಒಲವಿನ ಚಿಲುಮೆಯ ಧಾರೆ..

ಕೈ ಬಳೆ ನಾದದ ಗುಂಗನು ಅಳಿಸಲಾರೆ, 
ಮೈಮನ ಸೋಲುವ ಮತ್ತನು ಮರೆಯಲಾರೆ.. 

ಕೈ ಬಳೆ ನಾದದ ಗುಂಗನು ಅಳಿಸಲಾರೆ, 
ಮೈಮನ ಸೋಲುವ ಮತ್ತನು ಮರೆಯಲಾರೆ..  

ರೂಪಸಿ ರಂಭೆಯ ಸಂಗವ ತೊರೆಯಲಾರೆ,
ಮೌನ ಗೌರಿಯ ಮೋಹದ ಕೈ ಬಿಡಲಾರೆ.. 
ಬಾ..ರೆ.. ಬಾ..ರೆ... ಚೆಂದದ ಚೆಲುವಿನ ತಾರೆ, ಒಲವಿನ ಚಿಲುಮೆಯ ಧಾರೆ..  

ಬಾರೆ.. ಬಾರೆ... ಚೆಂದದ ಚೆಲುವಿನ ತಾರೆ, 
ಬಾರೆ.. ಬಾರೆ... ಒಲವಿನ ಚಿಲುಮೆಯ ಧಾರೆ.



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...