Thursday, February 8, 2018

ವೇದಾಂತಿ ಹೇಳಿದನು..


ಚಿತ್ರ: ಮಾನಸ ಸರೋವರ (1982)
(ನಿರ್ದೇಶನ: ಪುಟ್ಟಣ್ಣ ಕಣಗಾಲ್)
ಸಾಹಿತ್ಯ: ವಿಜಯನಾರಸಿಂಹ 
ಸಂಗೀತ: ವಿಜಯ ಭಾಸ್ಕರ್
ಗಾಯನ: ಪಿ. ಬಿ. ಶ್ರೀನಿವಾಸ್

ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು, ಮಣ್ಣೆಲ್ಲ ಹೊನ್ನು ಹೊನ್ನು, 

ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು, ಮಣ್ಣೆಲ್ಲ ಹೊನ್ನು ಹೊನ್ನು, 

ವೇದಾಂತಿ ಹೇಳಿದನು, ಈ ಹೆಣ್ಣು ಮಾಯೆ ಮಾಯೆ ;
ಕವಿಯೊಬ್ಬ ಕನವರಿಸಿದನು, ಓ.. ಇವಳೇ ಚೆಲುವೆ ;
ಇವಳ ಜೊತೆಯಲ್ಲಿ ನಾನು.. ಸ್ವರ್ಗವನೇ ಗೆಲ್ಲುವೆ.. ಸ್ವರ್ಗವನೇ ಗೆಲ್ಲುವೆ ;

ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು, ಮಣ್ಣೆಲ್ಲ ಹೊನ್ನು ಹೊನ್ನು, 

ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ ;
ಕವಿ ನಿಂತು ಸಾರಿದನು, ಓ... ಇದು ಅಲ್ಲ ಶೂನ್ಯ ;
ಜನ್ಮ ಜನ್ಮದಿ ಸವಿದೆ, ನಾನೆಷ್ಟು ಧನ್ಯ.. ನಾನೆಷ್ಟು ಧನ್ಯ ; 

ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು, ಮಣ್ಣು.. 
ಕವಿಯೊಬ್ಬ ಹಾಡಿದನು, ಮಣ್ಣೆಲ್ಲ ಹೊನ್ನು ಹೊನ್ನು.. 
ಮಣ್ಣೆಲ್ಲ ಹೊನ್ನು ಹೊನ್ನು, ಮಣ್ಣೆಲ್ಲ ಹೊನ್ನು ಹೊನ್ನು.



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...