ಮುಂಗಾರಿನ ಅಭಿಷೇಕಕೆ,
ಮಿದುವಾಯಿತು ನೆಲವು,
ಧಗೆ ಆರಿದ ಹೃದಯದಲ್ಲಿ,
ಪುಟಿದೆದ್ದಿತು ಚೆಲುವು,
ಬಾಯಾರಿದ ಬಯಕೆಗಳಲಿ,
ಥಳಥಳಿಸುವ ನೀರು,
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ,
ಪ್ರೀತಿಯಂತ ಹಸಿರು,
ಮೈ ಮನಗಳ ಕೊಂಬೆಯಲ್ಲಿ,
ಹೊಮ್ಮುವ ದನಿ ಇಂಪು,
ನಾಳೆಗೆ ನನಸಾಗುವ,
ಕನಸಿನ ಹೂ ಅರಳುವ ಕಂಪು,
ಭರವೆಸಗಳ ಹೊಲಗಳಲ್ಲಿ,
ನೇಗಿಲ ಗೆರೆ ಕವನ,
ಶ್ರಾವಣದಲಿ ತೆನೆದೂಗುವ,
ಜೀವೋತ್ಸವ ಗಾನ.
- ಜಿ. ಎಸ್. ಶಿವರುದ್ರಪ್ಪ
No comments:
Post a Comment