ಎಲ್ಲಿಗೆ ನಾ ಹೋದರಲ್ಲಿಗೆ ಬರುವನು
ಅಮ್ಮಾ.. ಚಂದಿರ ನನ್ನವನು
ನಿನ್ನವ ನಾನಾಗಿರುವುದರಿಂದ
ಅಮ್ಮಾ.. ಚಂದಿರ ನಿನ್ನವನು
ಮೂಡಣ ದೆಸೆಯೊಳು ಗಿರಿಗಳನೇರುತ
ಓಡುತ ಬರುತಿರೆ ನನಗಾಗಿ
ಮೂಡುವನೆಂಬರು ಜನರೆಲಮ್ಮಾ
ಕೂಡಲು ಬರುತಿರೆ ಮೂರ್ತಿಯನು
ನಮ್ಮನೆಯಂಗಳದಲ್ಲಾಡುತಿರೆ ನಾನು
ನೆತ್ತಿಯ ಮೇಲೆಯೆ ತೋರುವನು
ಮಾವನ ಮನೆಯೊಳಗುಳಿಯಲು ಹೋದರೆ
ಅಲ್ಲಿಗು ಬರುವನು ಚಂದಿರನು
ನೆರೆಮನೆ ಕಿಟ್ಟುವು ಕರೆದರೆ ಹೋಗನು
ಮೂರ್ತಿಯನೆಂದೂ ಬಿಟ್ಟಿರನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು
ಅಮ್ಮಾ.. ಚಂದಿರ ನನ್ನವನು.
- ಕುವೆಂಪು
('ನನ್ನ ಮನೆ' ಕವನ ಸಂಕಲನದಿಂದ)
('ನನ್ನ ಮನೆ' ಕವನ ಸಂಕಲನದಿಂದ)
No comments:
Post a Comment