Tuesday, February 20, 2018

ನಲ್ಲೆ ನಿನ್ನ ಮರೆಯಲು..


ನಲ್ಲೆ ನಿನ್ನ ಮರೆಯಲು ಏನೆಲ್ಲ ಮಾಡಿದೆ, 
ಆದರೆ ಎಲ್ಲೆಲ್ಲೂ ನಿನ್ನ ನೆನಪೇ ಕಾಡಿದೆ, 

ಅರಳಿ ನಿಂತ ಮಲ್ಲಿಗೆಯಲಿ ನಿನ್ನದೆ ನಗೆ, 
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ, 
ಸುಳಿದು ಬಂದ ಗಾಳಿಯಲ್ಲಿ ನಿನ್ನ ಪರಿಮಳ, 
ಮಾಮರದಲಿ ನಿನ್ನದೇ ಗಾನ ಮಂಜುಳ, 

ಮರಗಳು ಮೈತುಂಬ ನಮ್ಮ ಹೆಸರು ತೊಟ್ಟಿವೆ, 
ಪೊದೆಪೊದೆಗಳ ಮರೆಗಳಲ್ಲೂ ನಮ್ಮ ಗುಟ್ಟಿವೆ, 
ಬಳ್ಳಿ ಬಳ್ಳಿ ಗೆಳತಿ ಎಲ್ಲಿ ಎಂದು ಕೇಳಿದೆ, 
ದುಃಖದ ಮಡು ಮಾತಿಲ್ಲದೆ ಮೌನ ತಾಳಿದೆ. 

- ಬಿ. ಆರ್. ಲಕ್ಷ್ಮಣರಾವ್




No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...