Tuesday, February 20, 2018

ಇದಾವ ರಾಗ..


ಇದಾವ ರಾಗ ಮತ್ತೆ ಇದಾವ ರಾಗ, 
ಎದೆಯಾಳದಿಂದೆದ್ದು ನಭನೀಲಿಗೇರುತಿದೆ, 

ಯುಗ ಯುಗಾಂತರದೆದೆಯ ನೋವುಗಳ ಕೆರಳಿಸಿದೆ, 
ಜನುಮಗಳ ಕಣ್ಣೀರ ಕೊಳಗಳನು ಕದಡುತಿದೆ, 
ಮುರಿದ ಶತ ಬಯಕೆಗಳ ಮೇಲೆತ್ತಿ ತೂರುತಿದೆ, 
ಬಗೆಯ ಬಾನ್ಬಯಲಿನಲಿ ಮೋಡಗಳ ಕವಿಸುತಿದೆ, 

ಹಚ್ಚಹಸುರೆದೆಯಿಂದ ಬಿಸಿಯುಸಿರ ಹೊಮ್ಮಿಸಿದೆ, 
ಜೀವನದ ತಂತಿಗಳ ಝಮ್ಮೆಂದು ನಡುಗಿಸಿದೆ, 
ಸುಪ್ತಜ್ವಾಲಾಮುಖಿಯ ತಟ್ಟಿ ಎಚ್ಚರಿಸುತಿದೆ ,
ಹಣೆಯ ಬರಹವನೊರೆಸಿ ಬೇರೊಂದ ಬರೆಯುತಿದೆ, 
ಇದಾವ ರಾಗ.. ಮತ್ತೆ ಇದಾವ ರಾಗ. 

- ಜಿ. ಎಸ್. ಶಿವರುದ್ರಪ್ಪ




No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...