ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ,
ನೀನೇ ಸರಿ ಅನ್ನಬೇಕು,
ಪ್ರೀತಿಗಾಗಿಯೇ ಎಲ್ಲ ತೆತ್ತ ಜೀವವನು,
ಈ ರೀತಿ ಕಾಡುವುದು ಸಾಕು,
ಏಕಾಂತವೆನ್ನುವುದು ಎಲ್ಲಿ ನನಗೀಗ,
ಎದೆಯಲೇ ಮನೆಯಾ ಹೂಡಿರುವೆ,
ಶಾಂತಿ ನೆಮ್ಮದಿ ಈಗ ಯಾವ ಊರಾಚೆಗೋ,
ನಿನ್ನದೆ ನಾಮ ಜಪ ನನಗೆ,
ನಿನ್ನ ಕಾಣುವ ಮುನ್ನ ಏನೆಲ್ಲ ಆಸೆಗಳು,
ಏನೆಲ್ಲ ಕನಸಿತ್ತು ನನಗೆ,
ಎಲ್ಲಾ ತೀರಿತು ನಿನ್ನ ಧ್ಯಾನವೊಂದೆ ಈಗ,
ಕಿಚ್ಚಾಗಿ ಒಗ್ಗುತಿದೆ ಒಳಗೆ,
ಕಲ್ಲ ದೇವರ ಹಾಗೆ ನಿಲ್ಲಬಾರದು ಹೀಗೆ,
ಕ್ರೂರವಾದರೆ ಹೇಗೆ ಚೆಲುವು,
ಶರಣಾದ ಜೀವಕ್ಕೆ ಮರುಗಿ ಸಂತೈಸದೆ,
ದೂರವಾದರೆ ಹೇಗೆ ಒಲವು.
- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
No comments:
Post a Comment