ರಾಧೆ ಕಾದಳು ಮಾಧವನ ಜೊತೆಯಾಗಲು;
ಅವಳದು ಭಕ್ತಿಯ ನಿರೀಕ್ಷೆ, ಇವಳದು ಪ್ರೇಮಪರೀಕ್ಷೆ!
ಬೇರೆಯಾದರೂ ಇಬ್ಬರ ಭಾವ,
ಕಾದು ಸುಖಿಸಿದರು ಪ್ರೀತಿಯ ನೋವ;
ಭಕ್ತಿ ಮೇಲೋ ಪ್ರೀತಿ ಮೇಲೋ... ಯಾರಿಹರು ಇದ ವಿವರಿಸಲು?
ಕಾದು ನಿಂತಿರುವೆ ನಿನ್ನ ಸಾಗರದಂತಹ ಕಣ್ಣುಗಳ ನೋಡಲು;
ಈಸಿ ದಡವ ಸೇರಿ ನನ್ನ ಪ್ರೀತಿ ಹೇಳಲು.
"ಕರ್ಣಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ? ಮಂತ್ರ ಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ! ಬೆಂಕಿ ಕಣಾ! ಸಿಡಿಲು ಕಣಾ!" - ಕುವೆಂಪು..
ಶ್ವಾಸದಲಿ ಜೀವ ಬೆರೆತಂತೆ, ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ, ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...
No comments:
Post a Comment