ನನ್ನ "ಭಾವತರಂಗ Facebook Page" ನ್ನು ತಮ್ಮ ಅಕ್ಷರಗಳ ಮೂಲಕ ಅಲಂಕರಿಸಿದ್ದಾರೆ. ಹಿರಿ ಕಿರಿಯರೆನ್ನದೆ ಎಲ್ಲ ವಯೋಮಾನದ ಓದುಗರಿಗೂ ಪ್ರಿಯವಾಗಿರುವ ಇವರು ತರೀಕೆರೆಯಲ್ಲಿ ನಡೆಯುತ್ತಿರುವ, 'ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು' ಆಯೋಜಿಸಿರುವ "15 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ" ದ ಈ ಬಾರಿಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. .
ಕವನ, ಕಥೆ, ರಾಜಕೀಯ ಲೇಖನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮ ಛಾಪನ್ನೊತ್ತಿದ್ದಾರೆ.
ತಮ್ಮ ಕಾವ್ಯಾಸಕ್ತಿಯ ಬಗ್ಗೆ ಸೊಗಸಾಗಿ ಇವರೇ ಬಣ್ಣಿಸಿದ ಹಾಗೆ "ಕವಿತೆ ಬರೆಯುವುದು ಬರೀ ಹವ್ಯಾಸವಲ್ಲ. ನನ್ನ ಬದುಕಿನ ಒಂದು ಭಾಗ! ಕನಸು ಕಾಣುವ ವಯಸ್ಸು ಮುಗಿದರೂ ನನ್ನೊಳಗೆ ಹೊಸ ಕನಸುಗಳಿಗಿನ್ನೂ ಬರ ಬಂದಿಲ್ಲ. ವಯಸ್ಸಿನ ಹಂಗಿಲ್ಲದ ಗೆಳೆತನ ನನ್ನ ದೌರ್ಬಲ್ಯ"
ಇವರ ಅನೇಕಾನೇಕ ಗಹನ ಬರೆವಣಿಗೆ, ಕಥೆ, ಕವಿತೆ, ಲೇಖನಗಳು 'ವಿಜಯಕರ್ನಾಟಕ', 'ಕನ್ನಡ ಪ್ರಭ', 'ಮಯೂರ', 'ಮೂಕನಾಯಕ'.. ಹೀಗೆ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕನೆಕ್ಟ್ ಕನ್ನಡ, ಹಿಂಗ್ಯಾಕೆ, ವಾರ್ತಾ ಭಾರತಿ, ಸುರಹೊನ್ನೆ, ಅವಧಾರ್ ನ್ಯೂಸ್, ಕನ್ನಡಬ್ಲಾಗ್ ಲಿಸ್ಟ್, ನ್ಯೂಸ್ ಕನ್ನಡ, ಅವಧಿ ಮುಂತಾದ ಆನ್ಲೈನ್ ಸೈಟ್ ಗಳಲ್ಲಿಯೂ ಇವರ ಬರವಣಿಗೆ ಗರಿಗೆದರಿದೆ.
ಅಸಹಾಯಕ ಆತ್ಮಗಳು, ಮಣ್ಣಿನ ಕಣ್ಣು -1, ಮಣ್ಣಿನ ಕಣ್ಣು -2, ಕಾವ್ಯಖಜಾನೆ.. ಇನ್ನೂ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ.
'ಶ್ರೀ. ಕು. ಸ. ಮಧುಸೂದನ್ ನಾಯರ್ ರಂಗೇನಹಳ್ಳಿ' ಯವರಿಗೆ ಮತ್ತೊಮ್ಮೆ ಶುಭಾಶಯಗಳು.
- ಧನ್ಯವಾದಗಳೊಂದಿಗೆ,
'ಭಾವತರಂಗ'
No comments:
Post a Comment