Tuesday, February 13, 2018

ಮಣ್ಣಲಿ ಮಣ್ಣಾದರೂ..

ಮಾನವ.. ಕಳೆದು ಹೋಗದಿರು ಬದುಕಿನ ಜಂಜಾಟದಲ್ಲಿ;
ಜೀವನದಲ್ಲಿ ಎಲ್ಲವೂ ಬೇಕೆಂಬ ಅತಿಯಾಸೆಯಲ್ಲಿ;

ಹೃದಯವನ್ನು ಬಗೆದು ಸರಿಪಡಿಸುವವರು ಬೇಕಾದಷ್ಟಿದ್ದಾರೆ ವೈದ್ಯರ ರೂಪದಲ್ಲಿ;
ಒಂಚೂರು ಮುಲಾಮು ಹಚ್ಚಿ ಸಾಂತ್ವನ ಹೇಳುವವರಿಗಾಗಿಯಷ್ಟೇ ನಡೆದಿದೆ ಹುಡುಕಾಟವಿಲ್ಲಿ;

ಸಿಕ್ಕ ಪ್ರೀತಿಯ ಜೋಪಾನ ಮಾಡದವರು;
ಸಿಗದ ಪ್ರೇಮವನ್ನೂ ಅಮರವಾಗಿಸಿದವರು;
ಮುಂತಾದ ಬಗೆಯ ಹೃದಯಗಳು ಮಣ್ಣಲಿ ಮಣ್ಣಾಗಿವೆ..

ಜಗವನ್ನೇ ಗೆದ್ದು ಬೀಗಿದವರು ಮರೆಯಾಗಿದ್ದಾರೆ ನಿನ್ನೆ ನಾಳೆಗಳ ಮಧ್ಯದಲ್ಲಿ;
ಪ್ರೀತಿಯೊಂದೇ 'ಶಾಶ್ವತ' ಎಂಬ ಶಾಸನಗಳಡಿಯಲ್ಲಿ..

- ರಿಪುವರ್ಧನ.. 


2 comments:

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...