ನಿನ್ನ ಪ್ರೇಮದ ನಿರೀಕ್ಷೆಯಲ್ಲಿ ಹುಟ್ಟಿ, ನೆನಪಿನ ಬಯಕೆಯಲಿ ಮುಳುಗುತಿವೆ ನನ್ನ ಜೀವನದ ಹಗಲು ರಾತ್ರಿಗಳು..
ಗೊತ್ತಿಲ್ಲದವಳಂತೆ ಏಕೆ ನಟಿಸುವೆ.. ಕಣ್ಣೀರಾದ ಈ ಹೃದಯವ ಏಕೆ ನೋಯಿಸುವೆ..
ನಿನ್ನೆದೆಯ ತಳಮಳ ನನಗೂ ತಿಳಿಯುತಿದೆ..
ಮನಸಿನ ನೋಟದಿಂದ ನೋಡು.. ನನ್ನ ನೋಟದ ಮಾತನು ಕೇಳು..
ಎದೆಯಾಳದಿಂದ ಉಕ್ಕಿಬಂದ ಭಾವದ ರಾಗ ಕೇಳು..
ನಿನ್ನ ಉತ್ತರ ಕೇಳಲು ಕಾದು ಕುಳಿತಿದೆ ಈ ನನ್ನ ಜೀವ..
ಸುಳ್ಳಾದರೂ ಸರಿ,
ನಾ ನಿನಗೆ ಇಷ್ಟ ಎಂದು ಒಮ್ಮೆ ಹೇಳು..
ಈ ಉಸಿರಿನ ತಲ್ಲಣ ಅನುಭವಿಸಿ ಒಂದೊಮ್ಮೆ ಹೇಳು..
ನಿನ್ನ 'ಹೂಂ'ಕಾರದ ನಿನಾದದಿಂದ ಈ ಪ್ರಕೃತಿಯೇ ಸಂಭ್ರಮಿಸದಿದ್ದರೆ ನೀ ಹೇಳು..
ಪ್ರೀತಿಯ ಪ್ರತಿರೂಪ ದೇವತೆ ನೀನಾಗದಿದ್ದರೆ ನೀ ಕೇಳು..
'ಪ್ರೇಮ' ದ ವರ ನೀಡಿದ ನನ್ನ 'ಇಂದ್ರಾಣಿ' ನೀನಾಗದಿದ್ದರೆ ನೀ ಹೇಳು.
ವಾಹ್!! ತುಂಬಾ ಚೆನ್ನಾಗಿದೆ. ಹೀಗೇ ಪೋಸ್ಟ್ ಮಾಡ್ತಾ ಇರಿ. ಓದಿ ಖುಷಿಯಾಯ್ತು
ReplyDeleteThank you Anita
Delete