Tuesday, February 13, 2018

ನೆನಪುಗಳ ಬೆನ್ನೇರಿ..

ಪುಟ್ಟ ಬಾಡಿಗೆ ಮನೆ ; 
ಕಪಟ ಗೊತ್ತಿಲ್ಲದ ನಮ್ಮ ಬಾಲ್ಯ ;

ದಿನವಿಡೀ ಬಿಡುವಿರದ ಚಟುವಟಿಕೆಗಳು ;
ಇಷ್ಟವಿಲ್ಲದಿದ್ದರೂ ಹೊತ್ತೊತ್ತಿಗೆ ಹೊಟ್ಟೆಗೆ ಬೀಳುತ್ತಿದ್ದ ತಿಂಡಿ ಊಟಗಳು ;
ಸಂಜೆ ಅಮ್ಮ ಕಲಿಸಿಕೊಡುತ್ತಿದ್ದ Horlicks, Bournvita ಗಳು ;
ಅಪ್ಪನಿಗೆ ಪ್ರತಿ ಸಂಜೆ ಒಪ್ಪಿಸುತ್ತಿದ್ದ ಮನೆಪಾಠಗಳು ;
ಅಜ್ಜನೊಂದಿಗೆ ಸಾಗುತ್ತಿದ್ದ ಹರಟೆಗಳು ;

ಅಜ್ಜಿ ಹೊಲಿದ ಖೌದಿ ;
ಕಥೆ ಕೇಳುತಾ.. ಚಂದ್ರನ ನೋಡುತಾ.. ಥಟ್ಟನೆ ಬರುತ್ತಿದ್ದ ನಿದ್ರೆ ;
ಕನಸಲ್ಲಿ ಬರುತ್ತಿದ್ದ ಅಜ್ಜನ ಕಥೆಯ ಪಾತ್ರಧಾರಿಗಳು !!!

ಪ್ರಪಂಚ ಎಷ್ಟು ಚಿಕ್ಕದಿತ್ತು ...
ಬದುಕೆಷ್ಟು ಸೊಗಸಿತ್ತು ...

ಈಗ ಎಲ್ಲವೂ ಬದಲಾಗಿದೆ.. ನಮ್ಮ ನಿಮ್ಮೆಲರ ಮನಸು, ಸಮಯ, ಕಾಳಜಿ, ಬದುಕನ್ನು ಕಾಣುವ ರೀತಿ,
ಅಷ್ಟೇ ಅಲ್ಲ.. ಆಗಸದಲ್ಲಿನ ಚಂದ್ರನ ನಗುವೂ ಸಹ !!!

- ರಿಪುವರ್ಧನ..  


2 comments:

  1. Superb. It just brings all our childhood memories to compare with our today's so called sophisticated lifestyle.

    ReplyDelete

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...