ಚಿತ್ರ: ಬಂಧನ (1984)
ಉಷಾ ನವರತ್ನರಾಮ್ ರ 'ಬಂಧನ' ಕಾದಂಬರಿ ಆಧಾರಿತ
(ನಿರ್ದೇಶನ: ರಾಜೇಂದ್ರ ಸಿಂಗ್ ಬಾಬು)
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಎಂ. ರಂಗಾರಾವ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ
ಪ್ರೇಮದ ಕಾದಂಬರಿ ಬರೆದೆನು ಕಣ್ಣೀರಲಿ..
ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ..
ಮೊದಲ ಪುಟಕು ಕೊನೆಯ ಪುಟಕೂ.. ನಡುವೆ ಎನಿತು ಅಂತರ..
ಮೊದಲ ಪುಟಕು ಕೊನೆಯ ಪುಟಕೂ.. ನಡುವೆ ಎನಿತು ಅಂತರ..
ಬಂದು ಹೋಗುವ ಸ್ನೇಹ ಸಾವಿರ, ನಿಮ್ಮ ಬಂಧ ನಿರಂತರ..
ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನು..
ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನು..
ಕೊನೆಯ ಉಸಿರಲಿ ಒಂದೇ ಆಸೆ, ದೈವ ಹರಸಲಿ ನಿನ್ನನು..
ಪ್ರೇಮದ ಕಾದಂಬರಿ ಬರೆದೆನು ಕಣ್ಣೀರಲಿ..
ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ.. ಮುಗಿಯದಿರಲೀ ಬಂಧನ.
No comments:
Post a Comment