Thursday, November 9, 2017

ನಗು ನಗುತಾ ನಲಿ ನಲಿ..



ಚಿತ್ರ: ಬಂಗಾರದ ಮನುಷ್ಯ (1972) 
ಟಿ. ಕೆ. ರಾಮರಾವ್ ರ 'ಬಂಗಾರದ ಮನುಷ್ಯ' ಕಾದಂಬರಿ ಆಧಾರಿತ

(ನಿರ್ದೇಶನ: ಸಿದ್ದಲಿಂಗಯ್ಯ)
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ. ಕೆ. ವಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್

ನಗು ನಗುತಾ ನಲಿ ನಲಿ .. ನಲಿ ನಲಿ ಏನೇ ಆಗಲಿ 
ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ
ಅದರಿ೦ದ ನೀ ಕಲಿ

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ.. 
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ.. ಹೂಗಳು ಬಿರಿದಾಗ..

ನಗು ನಗುತಾ ನಲಿ ನಲಿ..

ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ..

ನಗು ನಗುತಾ ನಲಿ ನಲಿ ಏನೇ ಆಗಲಿ..

ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಮು೦ದೆ ಯೌವ್ವನ.. ಮದುವೆ ಬ೦ಧನ..
ಎಲ್ಲೆಲ್ಲೂ ಹೊಸ ಜೀವನ 
ಅಹ ಎಲ್ಲೆಲ್ಲೂ ಹೊಸ ಜೀವನ..
ಜೊತೆಯದು ದೊರೆತಾಗ.. ಮೈಮನ ಮರೆತಾಗ.. 

ನಗು ನಗುತಾ ನಲಿ ನಲಿ..

ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ.. ತಂದಿತಯ್ಯ ಮುದಿತನ..
ಅದರೊಳು ಹೊಸದಾದ.. ರುಚಿ ಇದೆ ಸವಿ ನೋಡ..

ನಗು ನಗುತಾ ನಲಿ ನಲಿ ಏನೇ ಆಗಲಿ.. 


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...