Thursday, November 9, 2017

ನೂರೊಂದು ನೆನಪು..



                                                       ಚಿತ್ರ: ಬಂಧನ (1984) 
ಉಷಾ ನವರತ್ನರಾಮ್ ರ 'ಬಂಧನ' ಕಾದಂಬರಿ ಆಧಾರಿತ 

(ನಿರ್ದೇಶನ: ರಾಜೇಂದ್ರ ಸಿಂಗ್ ಬಾಬು)
                                                       ಸಾಹಿತ್ಯ: ಆರ್. ಎನ್. ಜಯಗೋಪಾಲ್
                                                       ಸಂಗೀತ: ಎಂ. ರಂಗಾರಾವ್ 
                                                       ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ

ನೂರೊಂದು ನೆನಪು ಎದೆಯಾಳದಿಂದ 
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದೂ ಇರಲಮ್ಮ ಈ ದಿವ್ಯ ಬಂಧ..

ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ..

ಒಲವೆಂಬ ಲತೆಯು ತಂದಂಥ ಹೂವು
ಮುಡಿಯೇರೆ ನಲಿವು ಮುಡಿ ಜಾರೆ ನೋವು..

ಕೈಗೂಡಿದಾಗ ಕಂಡಂಥ ಕನಸು 
ಅದೃಷ್ಟದಾಟ ತಂದಂಥ  ಸೊಗಸು..

ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ 
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ 
ನೀವೆಂದು ಇರಬೇಕು ಸಂತೋಷದಿಂದ..

ನೂರೊಂದು ನೆನಪು..

ತುಟಿ ಮೇಲೆ ಬಂದಂಥ ಮಾತೊಂದೆ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು..

ಮೂರು ಗಂಟಲ್ಲಿ ಈ ಬಾಳ ನಂಟು
ಕೇಳಿ ಪಡೆದಾಗ ಸಂತೋಷವುಂಟು..

ನಿನ್ನ ಹರುಷದಲಿ ನನ್ನ ಉಸಿರಿರಲಿ
ನಿನ್ನ ಹರುಷದಲಿ ನನ್ನ ಉಸಿರಿರಲಿ
ನನ್ನೆಲ್ಲಾ ಹಾರೈಕೆ ಈ ಹಾಡಿನಿಂದಾ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ..
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದೂ ಇರಲಮ್ಮ ಈ ದಿವ್ಯಬಂಧ.



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...