Thursday, November 9, 2017

ಸದಾ ಕಣ್ಣಲೆ ಪ್ರಣಯದ..



ಚಿತ್ರ: ಕವಿರತ್ನ ಕಾಳಿದಾಸ (1983)
(ನಿರ್ದೇಶನ: ರೇಣುಕಾ ಶರ್ಮ)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ಎಂ. ರಂಗಾರಾವ್  
ಗಾಯನ: ಡಾ. ರಾಜಕುಮಾರ್ 

ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ 
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ 

ಸದಾ ಕಣ್ಣಲೆ.. 

ಕಣ್ಣೆರಡು ಕಮಲಗಳಂತೆ.. ಮುಂಗುರುಳು ದುಂಬಿಗಳಂತೆ. 
ನಾಸಿಕವು ಸಂಪಿಗೆಯಂತೆ.. ನೀ ನಗಲು ಹೂ ಬಿರಿದಂತೆ 
ನಡೆಯುತಿರೆ ನಾಟ್ಯದಂತೆ.. ರತಿಯೇ ಧರೆಗಿಳಿದಂತೆ..
ಈ ಅಂದಕೆ ಸೋತೆನು.. ಸೋತೆ ನಾನು.. 

ಗುಡುಗುಗಳು ತಾಳದಂತೆ.. ಮಿಂಚುಗಳು ಮೇಳದಂತೆ.. 
ಸುರಿವ ಮಳೆ ನೀರೆಲ್ಲ.. ಪನ್ನೀರ ಹನಿಹನಿಯಂತೆ.. 
ಜೊತೆಯಾಗಿ ನೀನಿರೆ ಸಾಕು.. ಭೂಲೋಕ ಸ್ವರ್ಗದಂತೆ..
ಈ ಪ್ರೇಮಕೆ ಸೋತೆನು.. ಸೋತೆ ನಾನು.. 

ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ.. 
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ.. ಸದಾ ಕಣ್ಣಲೆ.. 


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...