ಚಿತ್ರ: ರಥಸಪ್ತಮಿ (1986)
'ವಿದ್ಯುಲ್ಲತಾ ಸಾಸನೂರ್' ರ ಕಾದಂಬರಿ ಆಧಾರಿತ
(ನಿರ್ದೇಶನ: ಎಂ. ಎಸ್. ರಾಜಶೇಖರ್)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ /ಎಸ್. ಜಾನಕಿ
ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಅನು ದಿನ ಅನು ಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೆ..
ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ
ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಆ ಶಿಲ್ಪಿಯಾ ಹೊಂಗನಸಿನಾ
ಸೌಂದರ್ಯದಾ ಕನ್ನಿಕೆಯರೂ
ಕರವಾ ಮುಗಿದೂ ಶರಣೂ ಎಂದೂ
ಭಕುತಿಯಲೀ ಶ್ರೀಹರಿಯಾ ಸ್ತುತಿಸುತ
ಸಂಗೀತವಾ ಹಾಡಿವೆ..
ಶಿಲೆಗಳು ಸಂಗೀತವಾ ಹಾಡಿವೆ..
ಶಿಲೆಯಲೆ ಕಲೆಯನ್ನು ಸೆರೆಹಿಡಿದಾ
ಕಲೆಯನು ಶಿಲೆಯಲ್ಲಿ ಅರಳಿಸಿದಾ
ಉಳಿಯಿಂದ ಮೀಟಿ ಹೊಸ ನಾದ ತಂದು
ಹೊಸ ರೂಪ ತಂದ ಕಲೆಗಾರನ..
ಯಾವ ರೀತಿ ಈಗ ನಾನು ಹಾಡಿ
ಹೊಗಳುದುವೋ ಕುಣಿಯುದುವೋ ಎನ್ನುತ
ಸಂಗೀತವಾ ಹಾಡಿವೆ..
ಶಿಲೆಗಳು ಸಂಗೀತವಾ..
ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಅನು ದಿನ ಅನು ಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೆ.
No comments:
Post a Comment