Thursday, November 9, 2017

ದೇವರು ಹೊಸೆದ ಪ್ರೇಮದ ದಾರ..



 ಚಿತ್ರ: ಮುತ್ತಿನ ಹಾರ (1990)
(ನಿರ್ದೇಶನ: ಎಸ್. ವಿ. ರಾಜೇಂದ್ರ ಸಿಂಗ್ ಬಾಬು)
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಡಾ. ಬಾಲಮುರಳಿ ಕೃಷ್ಣ

ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ|
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ..

ಬೇಸಿಗೆಯಲಿಯ ಸೂರ್ಯ ಭೂತಾಯಿಯ ಸುಡುತಾನೆ
ದೇವರು ಅಗ್ನಿ ಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ
ಬೇಡ ಏಂದರೆ ನಾವು ಸುಡದೆ ಇರುವುದೆ ನೋವು
ಸರಿಯೋ ಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ..

ದೇವರು ಹೊಸೆದ ಪ್ರೇಮದ ದಾರ..

ಮೇಘವೊ ಮೇಘವೊ ಮುಂಗಾರಿನ ಮೇಘವೊ
ಮೇಘವೊ ಮೇಘವೊ ಹಿಂಗಾರಿನ ಮೇಘವೊ
ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ

ಗುಡು ಗುಡು ಗುಡು ಗುಡುಗಿನ
ಪಳ ಪಳ ಮಿಂಚುವ ಸಿಡಿಯುವ ಸಿಡಿಲಿನ
ಧರಣಿ ತಣಿಸುವ ಭರಣಿ ಮಳೆ ಮಳೆ
ಹಸ್ತ ಚಿತ್ತ ಸ್ವಾತಿ ಮಳೆ ಮಳೆ
ಸಿಡಿಯುವ ಭೂಮಿಗೆ ಗಂಗಾವಾಹಿ
ಉರಿಯುವ ಪ್ರೇಮಕೆ ಅಮೃತವರ್ಷಿಣಿ..

ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೆ…… ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೆ…
ನದಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು…ಕೂಹು ಕುಹು ಕುಹು ಕುಹು
ಋತುಗಳ ಚಕ್ರವು ತಿರುಗುತ ಇರಲು
ಕ್ಷಣಿಕವೆ ಕೊಗಿಲೆ ಗಾನದ ಹೊನಲು..

ಬಿಸಿಲೊ ಮಳೆಯೊ ಚಿಗುರೊ ಹಿಮವೊ
ಅಳುವೋ ನಗುವೊ ಸೊಲೋ ಗೆಲುವೊ
ಬದುಕೆ ಪಯಣ ನಡಿಯೆ ಮುಂದೆ
ಒಲವೆ ನಮಗೆ ನೆರಳು ಹಿಂದೆ

ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ|
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ.



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...