Thursday, November 9, 2017

ನೀನು ನೀನೆ..


ಚಿತ್ರ: ಗಡಿಬಿಡಿ ಗಂಡ (1993)
(ನಿರ್ದೇಶನ: ವಿ. ಎಸ್. ರೆಡ್ಡಿ)
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ

ನೀನು ನೀನೆ ಇಲ್ಲಿ ನಾನು ನಾನೆ
ನೀನು ನೀನೆ ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ 

||ನೀನು ನೀನೆ||

ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ

ಷಣ್ಮುಖ ಪ್ರಿಯರಾಗಾ....
ಷಣ್ಮುಖ ಪ್ರಿಯರಾಗ ಷಣ್ಮುಖ ಪ್ರಿಯರಾಗ
ಮಾರ್ಗಕಿಂಡೋಳಬಾಗಿ ನಡೆಸಿದೆ ದರ್ಬಾರು ನೋಡು
ಹಾಡುವೆಯ ಪಲ್ಲವಿಯ ಕೇಳುವೆಯ ಮೇಲೆ ಏಳುವೆಯ
ನೀನು ಎಂಬುವನಿಲ್ಲಿ ನಾದವಾಗಿರುವಾಗ 
ನಾನೇನು ಹಾಡಲಯ್ಯ ದಾಸಾನುದಾಸ

||ನೀನು ನೀನೆ||

ಈ ಸ್ವರವೇ ವಾದ್ಯ
ಈಶ್ವರನೇ ನಾದ
ತೃತಿಗತಿಯ ಕಾಗುಣಿತ ವೇದ
ಶಿವಸ್ಮರಣೆ ಸಂಗೀತ ಸ್ವಾದ
ದಮಕಗಳ ಪಾಂಡಿತ್ಯ ಶೋಧ
ಸುಮತಿಗಳ ಸುಜ್ಞಾನ ಭೋಧ
ಬದುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ
ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ
ನವರಸ ಅರಗಿಸಿ ಪರವಸ ಪಳಗಿಸಿ ಅಪಜಯ ಅಡಗಿಸಿ ಜಯಿಸಲು ಇದು ಶಕುತಿಯ ಯುಕುತಿಯ ವಿಷಯಾರ್ಥ
ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ ಕುಣಿದರೆ ಅದೇ ಭಕುತಿಯ ಮುಕುತಿಯ ಪರಮಾರ್ಥ

|| ನೀನು ನೀನೇ||


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...