ಚಿತ್ರ: ರಾಯರು ಬಂದರು ಮಾವನ ಮನೆಗೆ (1993)
(ನಿರ್ದೇಶನ: ದ್ವಾರಕೀಶ್)
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜ್-ಕೊಟಿ
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೆ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೆ
ಅಪರಾಧಿ ನಾನಲ್ಲ..
ನಿನ್ನಯ ಕೈಯಲ್ಲಿ ಗೊಂಬೆಯೂ ನಾನು
ಆಡಿಸಿ ಬೀಳಿಸಿ ನಗುತಿಹೆ ನೀನು
ನನ್ನಯ ಸರಿ ತಪ್ಪು ಹೊಣೆ ನಿನ್ನದು
ಶೋಧನೆ ಈ ದಿನ ನನಗೆ ಅದು
ಪ್ರಭು ಶಿಕ್ಷೆ ನೀಡುವೆಯೊ ರಕ್ಷೆ ಮಾಡುವೆಯೊ
ಪಾಪ ಪುಣ್ಯ ನಿನಗೆ ಅರ್ಪಣೆ
ಪರಮಾತ್ಮನೇ ಶ್ರೀ ಕೃಷ್ಣ ನೆ..
ಬೇಡದೆ ತಾಳಿಯ ನನಗೆ ನೀ ತಂದೆ
ಜೀವಕು ಜೀವಕು ಹೊಸ ನಂಟು ತಂದೆ
ಹೇಳು ನೀ ಎಕಿ ಇಂತು ಆ ಬಂಧನ
ಪ್ರೇಮಕೆ ಈ ಶಿಕ್ಷೆ ಏಕೀ ದಿನ
ಪ್ರಭು ಸ್ನೇಹಜೀವಿಯನು ತ್ಯಾಗ ಮೂರ್ತಿಯನು
ಮಮತೆ ಯಿಂದ ಕಾಯೋ ತಂದೆಯೇ
ನಮ್ಮೆಲ್ಲ ತಪ್ಪುಗಳ ಕ್ಷಮಿಸಿ ಪಾಲಿಸುತ
ಜೀವ ನೀಡಿ ಸಲಹು ತಂದೆಯೇ
ರಾಘವೇಂದ್ರನೆ ಗುರು ರಾಯನೆ..
ನಿಶ್ಚಯ ಮನುಜಗೆ ಮರಣವು ವೊಂದೇ
ಮನಸಿಗೆ ಶಾಂತಿಯು ಆಗಲೇ ತಂದೆ
ನಿಶ್ಚಲ ಮನಃ ಶಕ್ತಿ ದಯ ಪಲಿಸು
ಪಾದದೆ ಸ್ಥಳ ನೀಡಿ ಕೃಪೆ ತೋರಿಸು
ಪ್ರಭು ನಿನ್ನ ನಂಬಿರುವೆ ಶರಣು ಎಂದಿರುವೆ
ನಮ್ಮನೆಲ್ಲ ಒಂದು ಮಾಡಿಕೊ ಪರಮಾತ್ಮನೇ ಶ್ರೀ ಕೃಷ್ಣ ನೆ ..
No comments:
Post a Comment