ಚಿತ್ರ: ಮಂಕುತಿಮ್ಮ (1980)
(ನಿರ್ದೇಶನ: ಎಚ್. ಆರ್. ಭಾರ್ಗವ)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ
ನನ್ನ ಮುದ್ದು ತಾರೆ..
ನಗುತಲಿ ಬಾರೆ ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ..
ನನ್ನ ಮುದ್ದು ತಾರೆ ನಗುತಲಿ ಬಾರೆ ………
ನನ್ನ ನಿನ್ನ ಈ ಸ್ನೇಹಾ ಇಂದಿನದಲ್ಲ
ನಿನ್ನ ನನ್ನ ಸಂಬಂಧ ನೆನ್ನೆಯದಲ್ಲ
ಪರಿಚಯ ಎಂದೆಂದಿಗೂ ಮರೆಯುವುದಲ್ಲ..
ಅಪ್ಪ ಅಮ್ಮ ಯಾರೆಂದು ನೋಡಲೇ ಇಲ್ಲ
ಅಣ್ಣ ತಮ್ಮ ಎಲ್ಲೆಂದು ಹೆಳುವರಿಲ್ಲ
ನನಗೂ ನಿನ್ನಂತೆಯೇ ಗೆಳೆಯರು ಇಲ್ಲ
ನೀನು ದೂರಾದರೆ ಉಳಿಯುವುದಿಲ್ಲ
ನನ್ನ ಮುದ್ದು ತಾರೆ ನಗುತಲಿ ಬಾರೆ ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ..
ನನ್ನ ಕಂಡು ನೀ ಬಂದೆ ಏತಕೋ ಕಾಣೆ
ನನ್ನ ಮೇಲೆ ಈ ಪ್ರೇಮ ಏತಕೆ ಜಾಣೆ
ಅರಿಯೆನು ಎನೊನ್ದನು ನಾ ನಿನ್ನಾಣೆ
ನನ್ನ ಪುಟ್ಟ ಈ ಮನೆಗೆ ನೀ ಬೆಳಕಾದೆ
ಇನ್ನೂ ಬಾಳಬೇಕೆಂಬ ಆಸೆಯ ತಂದೆ
ತಿಮ್ಮನ ಸಂತೋಷಕೆ ಕಾರಣವಾದೆ
ಇಂದು ನಿನ್ನಿಂದ ನಾ ಹೊಸತನ ಕಂಡೆ..
ಚಂದ ಮಾಮ ಬಾರೋ ಚಕ್ಕುಲಿ ಮಾಮ ಬಾರೋ
ತಾರೆಗೆ ನಿದ್ದೆ ತಾರೋ ಚಂದದ ಕನಸ ತೋರೋ..
No comments:
Post a Comment