Sunday, October 29, 2017

ಮುಗುಳು ನಗೆಯೇ ನೀ ಹೇಳು..


ಚಿತ್ರ: ಮುಗುಳು ನಗೆ (2017)
(ನಿರ್ದೇಶನ: ಯೋಗರಾಜ್ ಭಟ್)
ಸಾಹಿತ್ಯ: ಯೋಗರಾಜ್ ಭಟ್
ಸಂಗೀತ: ಹರಿಕೃಷ್ಣ
ಗಾಯನ: ಸೋನು ನಿಗಮ್ 

                                                             ಮುಗುಳು ನಗೆಯೇ ನೀ ಹೇಳು..
ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..

ತುಸು ಬಿಡಿಸಿ ಹೇಳು ನನಗೆ.. ನನ ತುಟಿಯೆ ಬೇಕೇ ನಿನಗೆ..
ನನ್ನೆಲ್ಲ ನೋವಿಗೂ ನಗುವೇ.. ನೀ ಏಕೆ ಹೀಗೆ..

ಮುಗುಳು ನಗೆಯೇ ನೀ ಹೇಳು..
ಮುಗುಳು ನಗೆಯೇ ನೀ ಹೇಳು..

ಸಾಕಾಗದ ಏಕಾಂತವ.. ನಿನ್ನಿಂದ ನಾ ಕಲಿತೆ..
ಯಾಕಾಗಿ ನೀ ಮರೆಮಾಚುವೆ.. ನನ್ನೆಲ್ಲ ಭಾವುಕತೆ..
ಸೋತಂತಿದೆ ಸಂಭಾಷಣೆ.. ಗೆಲ್ಲುವುದು ನಿನಗೆ ಹೊಸತೇ..

ಅಳುವೊಂದು ಬೇಕು ನನಗೆ.. ಅರೆ ಘಳಿಗೆ ಹೋಗು ಹೊರಗೆ..
ಇಷ್ಟೊಳ್ಳೆ ಸ್ನೇಹಿತನಾಗಿ. ಕಾಡಿದರೆ ಹೇಗೆ..

ಮುಗುಳು ನಗೆಯೇ ನೀ ಹೇಳು..
ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..

ಕಣ್ಣಾಲಿಯ ಜಲಪಾತವ.. ಬಂಧಿಸಲು ನೀ ಯಾರು..
ನೀ ಮಾಡುವ ನಗೆಪಾಟಲು.. ಖಂಡಿಸಲು ನಾ ಯಾರು..

ಸಂತೋಷಕೂ.. ಸಂತಾಪಕೂ.. ಇರಲಿ ಬಿಡು ಒಂದೇ ಬೇರು..
ಕಂಗಳಲಿ ಬಂದಾ ಮಳೆಗೆ.. ಕೊಡೆಹಿಡಿವ ಆಸೆಯೆ ನಿನಗೆ..

ಅತ್ತುಬಿಡು ನನ್ನ ಜೊತೆಗೆ.. ನಗಬೇಡ ಹೀಗೆ..

ಮುಗುಳು ನಗೆಯೇ ನೀ ಹೇಳು..
ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ.. 


No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...