Sunday, October 29, 2017

ಅನಿಸುತಿದೆ ಯಾಕೋ ಇಂದು..


ಚಿತ್ರ: ಮುಂಗಾರು ಮಳೆ (2006)
(ನಿರ್ದೇಶನ: ಯೋಗರಾಜ್ ಭಟ್)
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಸಂಗೀತ: ಮನೋಮೂರ್ತಿ
ಗಾಯನ: ಸೋನು ನಿಗಮ್ 

ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು 
ಮಾಯದ ಲೋಕದಿಂದ ನನಗಾಗಿ ಬಂದವಳೆಂದು 
ಆಹಾ ಎಂತ ಮಧುರ ಯಾತನೆ 
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ.. 

ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ಯಾರ ಕನಸಲು ನೀನು ಹೋದರೆ ತಳಮಳ 
ಪೂರ್ಣ ಚಂದಿರ ರಜಾ ಹಾಕಿದ 
ನಿನ್ನಯ ಮೊಗವನು ಕಂಡ ಕ್ಷಣ
ನಾ ಕೈದಿ ನೀನೆ ಸೆರೆಮನೆ 
ತಬ್ಬಿ ನನ್ನ ಅಪ್ಪಿಕೋ ಒಮ್ಮೆ ಹಾಗೆ ಸುಮ್ಮನೆ..  

ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ 
ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ 
ಹಣೆಯಲಿ ಬರೆಯದ ನಿನ್ನ ಹೆಸರ 
ಹೃದಯದಿ ನಾನೇ ಕೊರೆದಿರುವೆ 
ನಿನಗುಂಟೆ ಇದರ ಕಲ್ಪನೆ 
ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ.



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...