ಚಿತ್ರ: ಮುಂಗಾರು ಮಳೆ 2 (2016)
(ನಿರ್ದೇಶನ: ಶಶಾಂಕ್)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಅರ್ಜುನ್ ಜನ್ಯ
ಗಾಯನ: ಸೋನು ನಿಗಮ್
ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು
ಹೃದಯದ ಮೂಲೆ ಮೂಲೆ ದಹಿಸಿದೆ ನಿನ್ನ ಜ್ವಾಲೆ
ಇರಬಹುದೇ ಹೇಳು ಕರಗದೆ.. ಬರಬಹುದೇ ದಾರಿ ಮರೆಯದೆ..
ಬಿಸಿಯೆ ಇರದ ಉಸಿರು ನಾನು ನೀನು ಇರದೇ
ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು
ನನ್ನ ಜಗವೆ ನಿನ್ನ ಹಿಡಿತಕೆ ಸಿಲುಕಿದೆ
ನಾನಾ ಬಗೆಯ ಭಾವನೆಯ ಹೊಡೆತಕೆ ಚಡಪಡಿಸಿದೆ
ತಡೆದಿರೋ ಮಾತೆಲ್ಲವೂ ತಲುಪಲೆ ಬೇಕಲ್ಲವೆ
ನಗಬಹುದೆ ಮೌನ ಮುರಿಯದೆ.. ಸಿಗಬಹುದೆ ದೂರ ಸರಿಯದೆ..
ಕಳೆದು ಹೋದ ಮಗುವು ನಾನು ನೀನು ಇರದೆ
ಚೂರು ಮರೆಗೆ ನೀನು ಸರಿದರು ಸಹಿಸೆನು
ನೀನೆ ತೆರೆದು ನೋಡು ಹೃದಯದ ಬೇಗುದಿಯನು
ಬದುಕಲು ಈ ನೂತನ ನೆಪಗಳೇ ಸಾಕಲ್ಲವೆ
ಕೊಡಬಹುದೆ ನೋವ ಒಲಿಯದೆ.. ಬಿಡಬಹುದೆ ಜೀವ ಬೆರೆಯದೆ..
ಕಿಟಕಿಯಿರದ ಮನೆಯು ನಾನು ನೀನು ಇರದೆ
No comments:
Post a Comment