Friday, February 16, 2018

ಯಾವ ಕವಿಯೂ ಬರೆಯಲಾರ..


ಚಿತ್ರ: ಭಾಗ್ಯದ ಲಕ್ಷ್ಮೀ ಬಾರಮ್ಮ (1986) 
(ನಿರ್ದೇಶನ: ಸಿಂಗೀತಂ ಶ್ರೀನಿವಾಸ್)
ಸಾಹಿತ್ಯ: ಚಿ. ಉದಯ್ ಶಂಕರ್  
ಸಂಗೀತ: ಸಿಂಗೀತಂ ಶ್ರೀನಿವಾಸ್   
ಗಾಯನ: ಡಾ. ರಾಜಕುಮಾರ್ 

ಯಾವ ಕವಿಯೂ ಬರೆಯಲಾರ,
ಯಾವ ಕವಿಯೂ ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ; 
ಹೃದಯದಲ್ಲಿ ನೀ ಬರೆದ, ಈ ಪ್ರೇಮ ಗೀತೆಯ,
ಯಾವ ಕವಿಯೂ ಬರೆಯಲಾರ, ಬರೆಯಲಾರ

ನಿನ್ನ ಕವಿತೆ ಎಂಥ ಕವಿತೆ, ರಸಿಕರಾಡೋ ನುಡಿಗಳಂತೆ,
ನಿನ್ನ ಕವಿತೆ ಎಂಥ ಕವಿತೆ, ರಸಿಕರಾಡೋ ನುಡಿಗಳಂತೆ,
ಮಲ್ಲೆ ಹೂವು ಅರಳಿದಂತೆ, ಚಂದ್ರಕಾಂತಿ ಚೆಲ್ಲಿದಂತೆ,
ಮಲ್ಲೆ ಹೂವು ಅರಳಿದಂತೆ, ಚಂದ್ರಕಾಂತಿ ಚೆಲ್ಲಿದಂತೆ,
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ

ಯಾವ ಕವಿಯೂ ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ; 
ಹೃದಯದಲ್ಲಿ ನೀ ಬರೆದ, ಈ ಪ್ರೇಮ ಗೀತೆಯ,
ಯಾವ ಕವಿಯೂ ಬರೆಯಲಾರ
  
ಪ್ರೇಮ ಸುಮವು ಅರಳುವಂತೆ, ಪ್ರಣಯ ಗಂಧ ಚೆಲ್ಲುವಂತೆ,
ಪ್ರೇಮ ಸುಮವು ಅರಳುವಂತೆ, ಪ್ರಣಯ ಗಂಧ ಚೆಲ್ಲುವಂತೆ,
ಕಂಗಳೆರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,
ಜೇನಿಗಾಗಿ ತುಟಿಗಳೆರಡು ಸನಿಹ ಸೇರುವಂತೆ 

ಯಾವ ಕವಿಯೂ ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ; 
ಹೃದಯದಲ್ಲಿ ನೀ ಬರೆದ, ಈ ಪ್ರೇಮ ಗೀತೆಯ,
ಯಾವ ಕವಿಯೂ ಬರೆಯಲಾರ, ಬರೆಯಲಾರ. 



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...