ನಾಯಿಯಂತೆ ಕೊಳೆ ಮೇಯುವಿ ಮನಸೇ
ಕಾಯ ಜೀವದೊಳು ನ್ಯಾಯವ ಹಿಡಿಯದೇ
ಮಾಯದೊಳಗೆ ಮುಳುಗೇಳುವಿ ಮನಸೇ
ಪರಸತಿ ಪರಧನ ಪರನಿಂದೆಗೆ ಮನ
ಹರಿಸುವಿ ಪಿರಿ ಪಿರಿ ಸಾಗಲೊ ಮನಸೇ
ಭಾರಿ ಶಾಸ್ತ್ರಗಳ ಪಟಿಸಿ ಗಿಳಿಯ ಥರ
ಸೇರಿ ಪಂಜರವ ತೊಳಲುವಿ ಮನಸೇ..
ಹೊಲಸಿನ ಸಿಂಬಳ ಸೇರಿಪ ನೊಣದಂತೆ
ತಿಳಿಯದೆ ವಿಷಯಕೆ ಬೀಳುವಿ ಮನಸೇ
ಶಿಸುನಾಳಧೀಶನ ಕಾಲಿಗೆ ಬಿದ್ದರೆ
ವ್ಯಸನ ಹರಿಸಿ ಕಾಯ್ವ ಅರಿಯಲೊ ಮನಸೇ..
No comments:
Post a Comment