ಹಾವು ತುಳಿದೇನೆ
ಹಾವು ತುಳಿದು ಹಾರಿ ನಿಂತೆ
ಜೀವ ಕಳವಳಿಸಿತೇ ಗೆಳತಿ!
ದೇಹ ತ್ರಯದ ಸ್ಮೃತಿಯು ತಪ್ಪಿ
ದೇವಾ ನೀನೆ ಗತಿಯು ಎನ್ನುತ
ಹರಿಗೆ ಹಾಸಿಗೆಯಾದ ಹಾವು
ಹರನ ತೋಳಿನೊಳಿರುವ ಹಾವು
ಧರೆಯ ಹೊತ್ತು ಮೆರೆವ ಹಾವಿನ
ಶಿರವ ಮೆಟ್ಟಿ ಶಿವನ ದಯದಿ
ಬೋದಾನಂದವಾಗಿ ಬರಲು
ದಾರಿಯೊಳಗೆ ಮಲಗಿ ಇರಲು
ಪಾದದಿಂದ ಪೊಡವಿಗೊತ್ತಿ
ನಾದಗೊಳಿಸಿತು ನಿಜದಿ ನೋಡೆ
ಸತ್ಯ ಶಿಶುವಿನಾಳಧೀಶನ
ನಿತ್ಯಸೇವಿಸುವಂಥ ಮಾನಿಗೆ
ಕತ್ತಲಲ್ಲಿ ಬಂದು ಕಾಲಿಗೆ
ಸುತ್ತಿಕೊಂಡಿತು ಸಣ್ಣ ನಾಗರ
No comments:
Post a Comment