Monday, December 4, 2017

ತೆರೆದಿದೆ ಮನೆ ಓ ಬಾ ಅತಿಥಿ..


ಚಿತ್ರ: ಹೊಸಬೆಳಕು (1982) 
"ವಾಣಿ" ಯವರ 'ಹೊಸಬೆಳಕು' ಕಾದಂಬರಿ ಆಧಾರಿತ
(ನಿರ್ದೇಶನ: ದೊರೈ ಭಗವಾನ್)
ಸಾಹಿತ್ಯ: ಕುವೆಂಪು  
ಸಂಗೀತ: ಎಂ. ರಂಗಾರಾವ್ 
ಗಾಯನ: ಎಸ್. ಜಾನಕಿ, ವಾಣಿ ಜಯರಾಮ್ 

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ...

ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ...

ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ

ತೆರೆದಿದೆ ಮನೆ ಓ ಬಾ ಅತಿಥಿ.



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...