Sunday, December 3, 2017

ನಾವಾಡುವ ನುಡಿಯೇ..


ಚಿತ್ರ: ಗಂಧದ ಗುಡಿ (1973)
(ನಿರ್ದೇಶನ: ವಿಜಯ್)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಪಿ. ಬಿ. ಶ್ರೀನಿವಾಸ್

ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ 
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ 
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ 
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ 
ಆಹಹಾ ಆಹಹಾ ಆಹಹಾ.. ಆಹಹಾ ಆಹಹಾ ಆಹಹಾ 

ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು 
ಆಹಹಾ ಓ ಹೊ ಹೋ.. ಆ‌ಆ ಓ ಹೋ 
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ 
ಚೆಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು 
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ.. ಹಾಹ 

ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ 
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ 
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋಹೋ.. ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ 

ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳು 
ಆಹಹಾ ಓ ಹೊ ಹೋ.. ಆ‌ಆ ಓ ಹೋ 
ಮುಗಿಲನು ಚುಂಬಿಸುವಾಸೆಯಲಿ ತೂಗಾಡುತ ನಿಂತ ಮರಗಳಲಿ ಹಾಡುತಿರೆ ಬಾನಾಡಿಗಳು 
ಎದೆಯಲ್ಲಿ ಸಂತಸದಾ ಹೊನಲು .. ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ ಆಹಹಾ.ಓಹೋ 

ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ 
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ 
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ .. ಓಹೋ. ಹೋ..



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...