ಬಿ. ಆರ್. ಛಾಯಾ ಹಾಡಿರುವ "ಹುಚ್ಚು ಖೋಡಿ ಮನಸು.."
ಗಾಯನ: ಬಿ. ಆರ್. ಛಾಯಾ
ರಚನೆ: ಎಚ್. ಎಸ್. ವೆಂಕಟೇಶ ಮೂರ್ತಿ
--------------------------------------------------------
Singer: B. R. Chaya
Poet: H. s. Venkatesha Murthy
ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು
ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು ಮರು ಘಳಿಗೆಯೇ ಮೌನ
ಮಾತು ಮಾತಿಗೇಕೋ ನಗು ಮರು ಘಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ
ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು
ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು
ಸೆರಗು ತೀಡಿದಷ್ಟು ಸುಕ್ಕು ಹಠ ಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಹೋದಳು
ಕೆನ್ನೆ ಕೊಂಚ ಕೆಂಪಾಯ್ತೆ ತುಟಿಯ ಬಣ್ಣ ಹೆಚ್ಚೇ
ನಗುತ ಅವಳ ಛೇಡಿಸುತಿದೆ ಗಲ್ಲದ ಕರಿ ಮಚ್ಚೆ
ಬರಿ ಹಸಿರು ಬರಿ ಹೂವು ಎದೆಯೊಳೆಷ್ಟೋ ಹೆಸರು
ಯಾವ ಮದುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು
No comments:
Post a Comment