ಹತ್ತಿದ ಮ್ಯಾಲ ತಿರುಗುವುದು ಹನ್ನೊಂದು ಫೇರಿ..
ಹಚ್ಚನ್ನ ಕರಡ ಹಾಕಲಿಬೇಕೋ
ನಿಚ್ಚಳ ನೀರ ಕುಡಿಸಲಿಬೇಕೋ
ಸಂಸ್ಕಾರ ಕಮಚೀಲಿ ಹೊಡಿಯಲಿಬೇಕೋ
ಅಚ್ಯುತ ಮೆಚ್ಚುವಂತೆ ಮೈ ತಿಕ್ಕಬೇಕೋ..
ತಪ್ಪುವುದಿಲ್ಲಪ್ಪ ಎರಡು ಹೊತ್ತು ದಾಣಿ
ತಿಂದ ಮೇಲ ತಿರಗತೈತಿ ಮೇಗಲ ಓಣಿ
ಖಾದರಲಿಂಗು ಪಾಡಿದ ವಾಣಿ
ಸೋಸಿ ನೋಡಿಕೋ ಹಾಕಿದ ಗೋಣಿ..
ಪಾಂಡವರ ಮನಿಯೊಳಗ ಪಾಗದಾಗಿತ್ತು
ಪಾಗಾದ ಗೂಟವ ಝಾಡಿಸಿ ಕಿತ್ತು
ಹೋಗುವಾಗ ಶಿಶುನಾಳಕ್ಕೋಡ್ಯೋಡಿ ಬಂತು
ಗೋವಿಂದ ಗುರುವೇ ತಾನಾಗಿತ್ತು..
No comments:
Post a Comment