Thursday, October 26, 2017

ನೀತಿಬೋಧೆ..


ಸಾಕು ಬಿಡು, ನೀತಿಯನು ಹೇಳದಿರು: "ಬೀಳದಿರು" 
         ಎಂದೆಲ್ಲರಂತೆ ನಾನಾಡಬಲ್ಲೆ..
ಪರಮಾತ್ಮನೆಲ್ಲೆಲ್ಲಿಯಡಗಿರುವನೆಂಬುದನು 
         ನೀ ಹೇಳಬೇಕೆ? ನಾನದನು ಬಲ್ಲೆ.. 
ಜಗದೀಶನೆಲ್ಲವನು ನೋಡುತಿಹನೆಂಬುದದು 
         ಹೊಸತಲ್ಲ, ಹಳೆಯ ನುಡಿ, ಕೇಳಿಬಲ್ಲೆ!
ನೀತಿಯಲಿ ಪರಮಸು ವಿಹುದೆಂದು ನಾ ಬಲ್ಲೆ;
        ಆದರೆದೆಯಳುಕುತಿರೆ ನಿಲ್ಲಲಾರೆ!

ಮುಗ್ಗರಿಸಿ ಬೀಳುತಿರಲೆತ್ತುವಿಯೋ ಹೇಳು ನೀನು?
ನನ್ನೆದೆಗೆ ಶಕ್ತಿಯೊಂದನು ಸುರಿಯಬಲ್ಲೆಯೇನು?
ಹಾಗಲ್ಲದಿರೆ ಬರಿದೆ "ಬೀಳದಿರು" ಎನಲು ನೀನು
ಬಿದ್ದವರ ಗುಂಪಿನಲಿ ಸೇರಿಸುವೆ ನಿನ್ನ ನಾನು!! 

                                               - ಕುವೆಂಪು



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...