Wednesday, October 25, 2017

ವೇದಾಂತಿ ಹೇಳಿದನು..


ವೇದಾಂತಿ ಹೇಳಿದನು
     ಹೊನ್ನೆಲ್ಲ ಮಣ್ಣು 
ಕವಿಯೊಬ್ಬ ಹಾಡಿದನು..
     ಮಣ್ಣೆಲ್ಲ ಹೊನ್ನು 

ವೇದಾಂತಿ ಹೇಳಿದನು
     ಈ ಹೆಣ್ಣು ಮಾಯೆ
ಕವಿಯು ಕನವರಿಸಿದನು..
     ಓ ಇವಳೇ ಚೆಲುವೆ
ಇವಳ ಜೊತೆಯಲಿ ನಾನು
     ಸ್ವರ್ಗವನೆ ಗೆಲುವೆ 
    
ವೇದಾಂತಿ ಹೇಳಿದನು
     ಈ ಬದುಕು ಶೂನ್ಯ
ಕವಿ ನಿಂತು ಸಾರಿದನು..
     ಇದು ಅಲ್ಲ ಅನ್ಯ 
ಜನ್ಮ ಜನ್ಮದಿ ಸವಿದೆ
     ನಾನೆಷ್ಟು ಧನ್ಯ!!

                 -  ಜಿ. ಎಸ್. ಶಿವರುದ್ರಪ್ಪ



No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...