Wednesday, October 25, 2017

ಕುರುಡು ಕಾಂಚಾಣ ಕುಣಿಯುತ್ತಲಿತ್ತು..


ಕುರುಡು ಕಾಂಚಾಣ ಕುಣಿಯುತ್ತಲಿತ್ತು,
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೋ 

ಬಾಣಂತಿಯೆಲುಬ ಸಾ- 
ಬಾಣದ ಬಿಳುಪಿನಾ 
ಕಾಣದ ಕಿರುಗೆಜ್ಜಿ ಕಾಲಾಗ ಇತ್ತೋ..
ಸಣ್ಣ ಕಂದಮ್ಮಗಳ 
ಕಣ್ಣೀನ ಕವಡೀಯ 
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ..  

ಬಡವರ ಒಡಲಿನ 
ಬಡಬಾನಲದಲ್ಲಿ 
ಸುಡು ಸುಡು ಪಂಜು ಕೈಯೊಳಗಿತ್ತೋ..
ಕಂಬನಿ ಕುಡಿಯುವ 
ಹುಂಬ ಬಾಯಿಲೆ ಮೈ ದುಂಬಿಯಂತುಧೋ ಉಧೋ ಎನ್ನುತಲಿತ್ತೋ.. 

ಕೂಲಿ ಕುಂಬಳಿಯವರ 
ಪಾಲಿನ ಮೈದೊಗಲ 
ಧೂಳಿಯ ಭಂಡಾರ ಹಣೆಯಯೊಳಗಿತ್ತೋ.. 
ಗುಡಿಯೊಳಗೆ ಗಣಣ, ಮಾಹಡಿಯೊಳಗ ತನನ.. 
ಅಂಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ.. 

ಹ್ಯಾಂಗಾರೆ ಕುಣಿಕುಣಿದು 
ಮಂಗಾಟ ನಡೆದಾಗ 
ಅಂಗಾತ ಬಿತ್ತೋ.. ಹೆಗಲಲಿ ಎತ್ತೋ..

- ದ. ರಾ. ಬೇಂದ್ರೆ




No comments:

Post a Comment

ನೀನೇ.. ಬರೀ ನೀನೇ..

ಶ್ವಾಸದಲಿ ಜೀವ ಬೆರೆತಂತೆ,  ಪ್ರೀತಿಯಲಿ ಕರುಣೆ ಅಡಗಿದಂತೆ, ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,  ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ, ನಿನ್ನನೋಡಲೆಂದೇ ಜಗವು...