ಶ್ವಾಸದಲಿ ಜೀವ ಬೆರೆತಂತೆ,
ಪ್ರೀತಿಯಲಿ ಕರುಣೆ ಅಡಗಿದಂತೆ,
ಹೃದಯಬಡಿತದಲಿ ಅಡಗಿದ ರಾಗ ತಾಳದಂತೆ,
ಜೀವನದ ರಥಬೀದಿಯ ಪಲ್ಲಕ್ಕಿಯ ಮೇಳದಂತೆ,
ನಿನ್ನನೋಡಲೆಂದೇ ಜಗವು ನನ್ನಲ್ಲಿಲ್ಲಿಗೆ ಕರೆತಂದಂತೆ...
ಅಡಗಿ ಕುಳಿತಿರುವೆ ನೀ ಮನದ ಮೂಲೆಮೂಲೆಯಲಿ..
ನಿನ್ನ ಆಪ್ತತೆಯನ್ನು ಹೇಗೆ ಬಣ್ಣಿಸಲಿ ಬರಿ ಪದಗಳಲಿ..
ಕನಸಲಿ.. ಕನವರಿಕೆಯಲಿ.. ನೀನೇ.. ಬರೀ ನೀನೇ..
ನನ್ನ ಒಡಲಾಳದಲಿ ಅಡಗಿರುವ ಸ್ವಾತಿಮುತ್ತು ನೀನೇ..
ಈ ಮಧುರ ಜೀವನದ ಅಭಿರುಚಿಯ ಕರ್ತೃವೂ ನೀನೇ..
Like this post? Like & Share my Facebook page so that you never miss out any article: Click here

- ರಿಪುವರ್ಧನ..
Like this post? Like & Share my Facebook page so that you never miss out any article: Click here